ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿಗೆ ಅಧಿಸೂಚನೆ |AAI Recruitment 2022 Notification

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಜೂನಿಯರ್ ಮತ್ತು ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು (AAI Recruitment 2022 Notification) ಪ್ರಕಟಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್‌ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ಹುದ್ದೆಯ ವಿವರ:
ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ) -132
ಕಿರಿಯ ಸಹಾಯಕ (ಕಚೇರಿ) -10
ಹಿರಿಯ ಸಹಾಯಕ (ಅಕೌಂಟ್‌) – 13
ಹಿರಿಯ ಸಹಾಯಕ (ಅಧಿಕೃತ ಭಾಷೆ)–1

ವೇತನ ಶ್ರೇಣಿ:
ಕಿರಿಯ ಸಹಾಯಕ (ಅಗ್ನಿಶಾಮಕ) –ರೂ. 31000-92000/-
ಕಿರಿಯ ಸಹಾಯಕ (ಕಚೇರಿ) –ರೂ. 31000-92000/-
ಹಿರಿಯ ಸಹಾಯಕ (ಅಕೌಂಟ್ಸ್‌) –ರೂ.36000-110000/-
ಹಿರಿಯ ಸಹಾಯಕ (ಅಧಿಕೃತ ಭಾಷೆ)–ರೂ.36000-110000/-

ಶೈಕ್ಷಣಿಕ ಅರ್ಹತೆ :
ಕಿರಿಯ ಸಹಾಯಕ ಅಗ್ನಿಶಾಮಕ ಸೇವೆ):
ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10 + 3 ವರ್ಷಗಳ ಡಿಪ್ಲೊಮಾ ಇನ್ ಮೆಕ್ಯಾನಿಕಲ್ / ಆಟೋಮೊಬೈಲ್ / ಫೈರ್ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಚಾಲನಾ ಪರವಾನಿಗೆ ಕಡ್ಡಾಯವಾಗಿ ಪಡೆದಿರಬೇಕು.

ಕಿರಿಯ ಸಹಾಯಕ (ಕಚೇರಿ):
ಟೈಪಿಂಗ್‌ನೊಂದಿಗೆ ಪದವಿ ಪಡೆದಿರಬೇಕು. ಇಂಗ್ಲಿಷ್‌ನಲ್ಲಿ 30 wpm ಅಥವಾ ಹಿಂದಿಯಲ್ಲಿ 25 wpm ಟೈಪಿಂಗ್ ಸ್ಪೀಡ್‌ ಇರಬೇಕು.

ಹಿರಿಯ ಸಹಾಯಕ (ಅಕೌಂಟ್‌):
03 ರಿಂದ 06 ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್‌ನೊಂದಿಗೆ ಬಿಕಾಂ ಪದವಿ ಹೊಂದಿರಬೇಕು.

ಹಿರಿಯ ಸಹಾಯಕ (ಅಧಿಕೃತ ಭಾಷೆ):
ಹಿಂದಿ ಮತ್ತು ಇಂಗ್ಲಿಷ್ ಅನ್ನು ಕಡ್ಡಾಯ / ಐಚ್ಛಿಕ ವಿಷಯಗಳಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹಿಂದಿ/ಇಂಗ್ಲಿಷ್ ಮಾಸ್ಟರ್ಸ್‌ ಪಡೆದಿರಬೇಕು.

ವಯೋಮಿತಿ :
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: 30 ವರ್ಷಗಳು.
25/08/2022 ರಂತೆ OBC (ನಾನ್-ಕ್ರೀಮಿ ಲೇಯರ್) ಗೆ 3 ವರ್ಷಗಳು ಮತ್ತು 5/08/2022 ರಂತೆ SC/ST ಗೆ 5 ವರ್ಷಗಳು ವಯಸ್ಸಿನ ಸಡಿಲಿಕೆ ಇರುವುದು

ಅರ್ಜಿ ಶುಲ್ಕ:
ಸಾಮಾನ್ಯ / ಒಬಿಸಿ/ ಇಡಬ್ಲ್ಯುಎಸ್‌ : 1000/-
ಎಸ್‌/ಎಸ್‌ಟಿ/ಪಿಹೆಚ್‌/ ಎಲ್ಲಾ ವರ್ಗದ ಮಹಿಳೆಯರಿಗೆ : 0/-
ಆದರೂ, ಯಾವುದೇ ವರ್ಗವನ್ನು ಲೆಕ್ಕಿಸದೆ ಎಲ್ಲಾ ಅಭ್ಯರ್ಥಿಗಳು ಕೋವಿಡ್ 19 ಗಾಗಿ ಆರೋಗ್ಯ ಮತ್ತು ನೈರ್ಮಲ್ಯ ವ್ಯವಸ್ಥೆಗಾಗಿ ರೂ.90/- ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆ & ಹೆಚ್ಚಿನ ವಿವರಗಳಿಗಾಗಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು AAI ವೆಬ್‌ಸೈಟ್‌ https://www.aai.aero/en/recruitment/release/284246 ಭೇಟಿ ಕೊಡಿ.

Leave a Comment

Your email address will not be published. Required fields are marked *

Scroll to Top